  ಮೂಲದೊಡನೆ  ಪರಿಶೀಲಿಸಿ

ಎಸ್ಟರ್: ನೀರು ಅಥವಾ ಆಮ್ಲ ಅಥವಾ ಕ್ಷಾರದೊಡನೆ ಕ್ರಿಯೆ ಎಸಗಿ ಆಲ್ಕೊಹಾಲ್ ಮತ್ತು ಒಂದು ಆಮ್ಲವನ್ನು (ಕ್ಷಾರ ಬಳಸಿದಾಗ ಆಮ್ಲದ ಒಂದು ಲವಣವನ್ನು) ಕೊಡುವ ಒಂದು ಸಂಯುಕ್ತ. ಇದರ ವಿಪರ್ಯಯ ಕ್ರಿಯೆಯಲ್ಲಿ ಆಲ್ಕೊಹಾಲ್ ಮತ್ತು ಆಮ್ಲ ಕ್ರಿಯೆ ಎಸಗಿ ನೀರಿನ 

ಆಂಶ ನಷ್ಟವಾಗಿ ಎಸ್ಟರ್ ಉತ್ಪನ್ನವಾಗುವುದು. ಆದ್ದರಿಂದ ಎಸ್ಟರ್ ಆಲ್ಕೊಹಾಲ್ ಮತ್ತು ಆಮ್ಲದವ್ಯುತ್ಪನ್ನ. ಇದನ್ನು ತಯಾರಿಸಲು ಇತರ ವಿಧಾನಗಳೂ ಇವೆ. ಎಸ್ಟರಿನ ತಯಾರಿಕೆಯಲ್ಲಿ ಬಳಸುವ ಆಮ್ಲಗಳು ನಿರವಯವ ಅಥವಾ ಸಾವಯವ ಆಮ್ಲಗಳಾಗಿರಬಹುದು. 

ಅಂತೆಯೇ ಎಸ್ಟರಿನಲ್ಲಿ ಭಿನ್ನ ಪ್ರಭೇದಗಳಿವೆ.
ನಿರವಯವ ಆಮ್ಲ ಎಸ್ಟರುಗಳು : ಆಕ್ಸಿಜನ್ ಇರುವ ಖನಿಜಾಮ್ಲಗಳೊಡನೆ (ಮಿನರಲ್ ಆಸಿಡ್ಸ್‌) ಆಲ್ಕೊಹಾಲುಗಳು ವರ್ತಿಸಿದಾಗ ಎಸ್ಟರುಗಳು ದೊರೆಯುತ್ತವೆ. ಈ ಬಗೆಯ ಎಸ್ಟರುಗಳಲ್ಲಿ ಸಲ್ಫೇಟುಗಳು, ನೈಟ್ರೇಟುಗಳು ಮತ್ತು ಫಾಸ್ಪೇಟುಗಳು ಮುಖ್ಯವಾದುವು. ಅವುಗಳ 

ನಿರ್ಮಾಣದ ಬಗೆಯನ್ನು ಮುಂದಿನ ಸಮೀಕರಣಗಳು ಸೂಚಿಸುತ್ತವೆ.
2ಅಊ3ಅ0ಊ + ಊಔSಔ2ಔಊ 0ಊ  ಲ (ಅಊ30) 2 Sಔ2 + 2ಊ2ಔ
ಮೆಥನಾಲ್   ಸಲ್ಫ್ಯೂರಿಕ್ ಆಮ್ಲ ¬  ಡೈಮಿಥೈಲ್ ಸಲ್ಫೇಟ್
ಅಊ2  -  ಔಊ		          ಅಊ2 - ಔಓಔ2
  |                                           |
ಅಊ   -  ಔಊ      +    3ಊಓಔ3ಲಅಊ -ಔಓಔ2 + 3ಊ2ಔ + 3ಊ2ಔ
  |		   ನೈಟ್ರಿಕ್ ಆಮ್ಲ     |
 ಅಊ2  -  ಔಊ		         ಅಊ2 - ಔಓಔ2
ಗ್ಲಿಸರಾಲ್ 		ಗ್ರಿಸರಿಲ್ ಟ್ರೈನೈಟ್ರೇಟ್ (ನೈಟ್ರೊ ಗ್ಲಿಸರಿನ್)
ಆಲ್ಕೀನುಗಳು ಸಲ್ಫ್ಯೂರಿಕ್ ಆಮ್ಲದೊಡನೆ ಸಂಕಲನಗೊಂಡಾಗಲೂ ಸಲ್ಫೇಟ್ ಎಸ್ಟರುಗಳು ಉತ್ಪತ್ತಿಯಾಗುತ್ತವೆ.
ಅಊ2=ಅಊ2ಲ ಅಊ3 -ಅಊ2 —ಔSಔ2 — ಔಊ
           ಇಥಲೀನ್        ಈಥೈಲ್    ಮಾನೊಸಲ್ಪೇಟ್
ಡೈಮೀಥೈಲ್ ಮತ್ತು ಡೈ ಈಥೈಲ್ ಸಲ್ಪೇಟುಗಳು ಇತರ ಸಂಯುಕ್ತಗಳಿಗೆ, ಮೀಥೈಲ್ ಮತ್ತು ಈಥೈಲ್ ಪುಂಜಗಳನ್ನು ಸೇರಿಸಲು ಉಪಯೋಗಿಸುವ ಪರಿವರ್ತಕಗಳು (ರೀಏಜೆಂಟ್ಸ್‌).
ನೈಟ್ರೊ ಗ್ಲಿಸರಿನ್ ಎಂದು ಪರಿಚಿತವಾಗಿರುವ ಗ್ಲಿಸರಿಲ್ ಟ್ರೈ ನೈಟ್ರೇಟ್ ಎಸ್ಟರ್ ಡೈನಮೈಟ್ ತಯಾರಿಕೆಗೆ ಬೇಕಾಗಿರುವ ಸ್ಪೋಟಕ.
ಫಾಸ್ಪಾರಿಕ್ ಆಮ್ಲದ ಎಸ್ಟರುಗಳ ನಿರ್ಮಾಣ ಮತ್ತು ವಿಭಜನೆಗಳು ಅನೇಕ ಜೀವ ರಾಸಾಯನಿಕ (ಬಂiೆÆಕೆಮಿಕಲ್) ಸಂಯೋಜನೆಗಳಲ್ಲಿ ಕಂಡುಬರುತ್ತವೆ. ಹಿರಿಯ ಅಣುತೂಕದ ಆಲ್ಕೊಹಾಲುಗಳ ಸಲ್ಪೋನೇಟ್ ಎಸ್ಟರುಗಳು ಲೋಹ ಲವಣಗಳೇ ಕೃತಕ ಮಾರ್ಜಕ 

ವಸ್ತುಗಳು (ಡಿಟರ್ಜೆಂಟ್ಸ್‌). ಗಡಸು ನೀರಿನಲ್ಲೂ ಧಾರಾಳವಾಗಿ ನೊರೆ ಕೊಡುವುದು ವೈಶಿಷ್ಟ್ಯ. ಆದ್ದರಿಂದ ಇವುಗಳ ಉಪಯೋಗ ಈಚೆಗೆ ಹೆಚ್ಚುತ್ತಿದೆ.
ಸಾವಯವ ಆಮ್ಲ ಎಸ್ಟರುಗಳು : ಅಧಿಕ ಸಂಖ್ಯೆಯ ಎಸ್ಟರುಗಳನ್ನು ಕೃತಕವಾಗಿ ತಯಾರಿಸಲಾಗುತ್ತಿದ್ದರೂ ಪ್ರಕೃತಿಯಲ್ಲಿ ಅನೇಕ ಎಸ್ಟರುಗಳು ದೊರೆಯುತ್ತವೆ. ಅನೇಕ ಹಣ್ಣು ಹೂವುಗಳ ಮಾಧುರ್ಯ ಸುಗಂಧಗಳಿಗೆ ಎಸ್ಟರುಗಳೇ ಕಾರಣ. ದ್ರಾಕ್ಷಿ, ಅನಾನಸ್ ಹಣ್ಣುಗಳಲ್ಲಿ 

ಈಥೈಲ್ ಅಸಿಟೇಟ್; ಸೇಬು, ಬಾಳೆಹಣ್ಣುಗಳಲ್ಲಿ ಅಮೈಲ್ ಅಸಿಟೇಟ್; ಪೆಪ್ಪರಮಿಂಟ್ ತೈಲದಲ್ಲಿ ಮೆಂಥೈಲ್ ಅಸಿಟೇಟ್; ಲವಂಗದಲ್ಲಿ ಮೆಂಥೈಲ್ ಬೆಂಜೋ಼ಯೇಟ್; ಶೇವಂತಿಗೆಯಲ್ಲಿ ಮೀಥೈಲ್ ಅಂಥ್ರಾನಿಲೇಟ್ ಮೊದಲಾಗಿ ಸುಗಂಧ ಮಧುರ ದ್ರವ್ಯಗಳನ್ನು ನೀಡುವ ಎಲ್ಲ 

ಹಣ್ಣು ಹೂವುಗಳಲ್ಲೂ ಹಲವು ಎಸ್ಟರುಗಳಿದ್ದೇ ಇವೆ. ಇವನ್ನು ಅವುಗಳ ಆಕರಗಳಿಂದ ಬೇರ್ಪಡಿಸಲು ಒತ್ತುವಿಕೆ (ಪ್ರೆಸ್ಸಿಂಗ್) ಆಸವೀಕರಣ (ಡಿಸ್ಟಿಲ್ಲೇಷನ್) ಅಥವಾ ಲೀನಕಾರೀ ಸಂಸ್ಕರಣ (ಸಾಲ್ವೆಂಟ್ ಎಕ್ಸ್‌ಟ್ರಾಕಷನ್) ವಿಧಾನಗಳನ್ನು ಉಪಯೋಗಿಸಲಾಗುತ್ತದೆ. ಹೀಗೆ 

ಸುಗಂಧ, ಮಾಧುರ್ಯಗಳಿಗೆ ಕಾರಣವಾದ ಎಸ್ಟರುಗಳು ಸಾಮಾನ್ಯ ಮತ್ತು ಕಿರಿಯ ಅಣುತೂಕದವು. ಹಿರಿಯ ಅಣುತೂಕದ ಆಮ್ಲಗಳ ಉತ್ಪನ್ನ ಎಸ್ಟರುಗಳಲ್ಲಿ ಸುವಾಸನೆಯಾಗಲಿ ಸುಗಂಧವಾಗಲಿ ಇರುವುದಿಲ್ಲ. ಈ ಬಗೆಯ ಅನೇಕ ಎಸ್ಟರುಗಳ ಮಿಶ್ರಣವೇ ಎಣ್ಣೆ, 

ಕೊಬ್ಬುಗಳು, ಇನ್ನೂ ಹೆಚ್ಚು ಅಣುತೂಕದ ಎಸ್ಟರುಗಳು ಪ್ರಾಣಿ ಸಸ್ಯಜನ್ಯ ಮೇಣಗಳಲ್ಲಿವೆ.
ಪ್ರಕೃತಿಯಲ್ಲಿ ದೊರೆಯುವ ಎಲ್ಲ ಬಗೆಯ ಎಸ್ಟರುಗಳನ್ನೂ ಸುಲಭವಾಗಿ ಆಮ್ಲ, ಆಲ್ಕೊಹಾಲುಗಳಿಂದ ಪ್ರಯೋಗಶಾಲೆಯಲ್ಲಿ ತಯಾರಿಸಬಹುದು, ಅಷ್ಟೇ ಅಲ್ಲದೆ ಪ್ರಕೃತಿಯಲ್ಲಿ ದೊರೆಯದ ಅಸಂಖ್ಯಾತ ಎಸ್ಟರುಗಳನ್ನೂ ಸಂಯೋಜಿಸಲಾಗಿದೆ.
ಎಸ್ಟರಿಫಿಕೇಷನ್ ಅಥವಾ ಎಸ್ಟರುಗಳ ತಯಾರಿಕೆ : ಎಸ್ಟರುಗಳ ತಯಾರಿಕೆಯ ಹಲವು ಮುಖ್ಯ ವಿಧಾನಗಳನ್ನು ಮುಂದೆ ವಿವರಿಸಿದೆ.
1. ಆಲ್ಕೊಹಾಲ್ ಮತ್ತು ಆಮ್ಲಗಳು ವೇಗವರ್ಧಕವೊಂದರ ಸಂಪರ್ಕದಲ್ಲಿ ನೇರ ಸಂಯೋಗದಿಂದ ಎಸ್ಟರುಗಳಾಗಿ ಪರಿವರ್ತಿತವಾಗುತ್ತವೆ. ಇದರಲ್ಲಿ ಹೈಡ್ರೊಜನ್ ಕ್ಲೋರೈಡ್ ಅಥವಾ ಪ್ರಬಲ ಸಲ್ಪ್ಯೂರಿಕ್ ಆಮ್ಲ ಸಾಮಾನ್ಯವಾಗಿ ಬಳಸುವ ವೇಗವರ್ಧಕಗಳು. ಈಚೆಗೆ 

ಆಮ್ಲಗುಣವನ್ನುಳ್ಳ ಥಯೋನಿಲ್ ಕ್ಲೊರೈಡ್, ಸಲ್ಪ್ಯೂರಿಕ್ ಕ್ಲೋರೈಡ್, ಬೆಂಜಿûೕನ್ ಸಲ್ಪೋನಿಕ್ ಆಮ್ಲ, ಪ್ಯಾರಟಾಲುಯೀನ್ ಸಲ್ಪ್ಯೂನಿಕ್ ಆಮ್ಲ ಮೊದಲಾದುವನ್ನು ಅನೇಕ ಎಸ್ಟರುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತಿದೆ.
			ವೇಗವರ್ಧಕ
 ಖ- ಅಔಔಊ + ಖ’ಔಊ	  ಲ	 ಖ ಅಔಔಖ’ + ಊ2ಔ
ಆಮ್ಲ 	       ಆಲ್ಕೊಹಾಲ್ 	  	  ಎಸ್ಟರ್      ನೀರು
ಇದೊಂದು ವಿಪರ್ಯಯ (ರಿವರ್ಸಿಬಲ್) ಕ್ರಿಯೆಯಾದ್ದರಿಂದ ಎಸ್ಟರಿನ ನಿರ್ಮಾಣ ಇಲ್ಲಿ ಸಂಪುರ್ಣವಾಗಿ ಆಗದು. ಕ್ರಿಯೆಯ ಸಮತೋಲ ಎಸ್ಟರ್ ನಿರ್ಮಾಣದ ಪರವಾಗಿ ಇರಬೇಕಾದರೆ ಆಮ್ಲದ ಆಲ್ಕೊಹಾಲಿನ ಪ್ರಮಾಣ ಅಧಿಕವಾಗಿರಬೇಕು; ಅಲ್ಲದೇ ಉತ್ಪನ್ನವಸ್ತುಗಳಾದ 

ನೀರು ಮತ್ತು ಎಸ್ಟರುಗಳಲ್ಲಿ ಒಂದನ್ನಾದರೂ ನಿರ್ಮಾಣವಾದಂತೆಲ್ಲ ಕ್ರಿಯಾಮಿಶ್ರಣದಿಂದ ಹೊರ ತೆಗೆಯುತ್ತಿರಬೇಕು. ಈ ಪರಿಸ್ಥಿತಿಯಲ್ಲಿ ವಿಪರ್ಯಯ ಕ್ರಿಯಾವೇಗ ಕಡಿಮೆಯಾಗಿ ಎಸ್ಟರಿನ ನಿರ್ಮಾಣ ಕಾರ್ಯ ತ್ವರಿತಗೊಳ್ಳುತ್ತದೆ.
ಪ್ರೈಮರಿ ಮತ್ತು ಸೆಕೆಂಡರಿ ಆಲ್ಕೊಹಾಲುಗಳನ್ನು ಬಳಸಿ ಎಸ್ಟರುಗಳನ್ನು ತಯಾರಿಸುವಾಗ ಆಲ್ಕೊಹಾಲ್ ಹೈಡ್ರೊಜನ್ನನ್ನೂ ಆಮ್ಲ ಹೈಡ್ರೊಕ್ಸಿಲ್ ಪುಂಜವನ್ನೂ ಒದಗಿಸಿ ನೀರಿನ ಒಂದು ಅಣುವನ್ನು ಉತ್ಪತ್ತಿ ಮಾಡುತ್ತವೆ. ಆದರೆ ಟರ್ಷಿಯರಿ ಆಲ್ಕೊಹಾಲಿನಿಂದಲೂ 

ಹೈಡ್ರೊಜನ್ನಿನ ಒಂದು ಪರಮಾಣು ಆಮ್ಲದಿಂದಲೂ ಬರುತ್ತವೆ.

2. ಆಮ್ಲಗಳಿಗೆ ಬದಲಾಗಿ ಆಮ್ಲ ಅನ್ಹೈಡ್ರೈಡ್ ಆಮ್ಲಹ್ಯಾಲೈಡ್, ಆಮ್ಲೈಡ್ ಮತ್ತು ಸಯನೈಡ್ ಅಥವಾ ನೈಟ್ರೇಟುಗಳನ್ನು ಎಸ್ಟರಿಫಿಕೇನ್ನಿಗೆ ಉಪಯೋಗಿಸಬಹು ದೆಂಬುದನ್ನು ಮುಂದಿನ ಸಮೀಕರಣಗಳಿಂದ ತಿಳಿಯಬಹುದು.
(i)	(ಖ-ಅಔ2)ಔ + ಖ’ಔಊ  ಖ - ಅಔಔಊ + ಖ ಅಔಔಖ’
ಅಥವಾ
	(ಖ-ಅಔ2)ಔ + 2ಖ’ಔಊ  2ಖಅಔಔಖ’ + ಊ20
(ii)	ಖ-ಅಔಘಿ + ಖ’ಔಊ  ಖ ಅಔಔಖ’+ಊಘಿ
(iii)	ಖ-ಅಓ +ಖ’ಔಊ  ಖ-ಅಔಔಖ’+ಓಊ3
                                +ಊಔಊ
3. ಆಮ್ಲ ಲವಣಗಳಿಂದ ಎಸ್ಟರುಗಳನ್ನು ತಯಾರಿಸಲು ಎರಡು ಬಗೆಯ ವಿಧಾನಗಳನ್ನು ಅನುಸರಿಸಬಹುದು. ಮೊದಲ ವಿಧಾನದಲ್ಲಿ ಥಯೋನಿಲ್ ಕ್ಲೋರೈಡ್ ಮತ್ತು ಆಲ್ಕೊಹಾಲನ್ನೂ ಎರಡನೆಯ ವಿಧಾನದಲ್ಲಿ ಆಲ್ಕೈಲ್ ಹ್ಯಾಲೈಡುಗಳನ್ನೂ ಬಳಸುತ್ತಾರೆ. ಈ ಕ್ರಿಯೆಗಳನ್ನು 

ಮುಂದಿನ ಸಮೀಕರಣಗಳು ಸೂಚಿಸುತ್ತವೆ.
(i) ಲ 
    ಆಲ್ಕೈಲ್ ಕ್ಲೋರೋಸಲ್ಫೇಟ್
     
(ii)	ಲ 
 4. ಮೀಥೈಲ್ ಎಸ್ಟರುಗಳನ್ನು ಮಾತ್ರ ತಯಾರಿಸಲು ಡೈ ಆಜೋ಼ ಮೀಥೇನ್ ಎಂಬ ಪರಿವರ್ತಕವನ್ನು ಅನೇಕ ಸಂದರ್ಭಗಳಲ್ಲಿ ಉಪಯೋಗಿಸಲಾಗುತ್ತದೆ.

5. ಅಮೈಡುಗಳನ್ನು ಆಲ್ಕೊಹಾಲೀಕರಣಕ್ಕೆ (ಆಲ್ಕೊಹಾಲೈಸಿಸ್) ಒಳಪಡಿಸಿದಾಗ ಉತ್ಪತ್ತಿಯಾಗುತ್ತದೆ.

6. ಹಲವು ವಿಶಿಷ್ಟ ವೇಗವರ್ಧಕಗಳ ಸಂಪರ್ಕದಲ್ಲಿ ಆಲ್ಕೊಹಾಲುಗಳಿಂದ ಹೈಡ್ರೊಜನ್ ನಿವಾರಣೆ (ಡೀಹೈಡ್ರೊಜಿನೇಷನ್) ಮಾಡಿ ಎಸ್ಟರುಗಳನ್ನು ತಯಾರಿಸಬಹುದು.

7. ಇದೇ ರೀತಿ ಪ್ರತ್ಯೆಕ ಮತ್ತು ವಿಶಿಷ್ಟ ವಿಧಾನಗಳನ್ನು ಅನುಸರಿಸಿ ಆಲ್ಡಿಹೈಡುಗಳನ್ನೂ ಎಸ್ಟರುಗಳಾಗಿ ಪರಿವರ್ತಿಸಬಹುದು.

8. ಕೀಟೀನ್ ಸಂಯುಕ್ತದಿಂದ ಅಸಿಟಿಕ್ ಆಮ್ಲದ ಎಸ್ಟರುಗಳನ್ನು ತಯಾರಿಸಬಹುದು.

9. ಆಮ್ಲ ಅಥವಾ ಕ್ಷಾರ ವೇಗವರ್ಧಕಗಳ ನೆರವಿನಿಂದ ಎಸ್ಟರುಗಳಲ್ಲಿನ ಆಲ್ಕೊಹಾಲ್ ಮೂಲದ ಪುಂಜವನ್ನು ಮತ್ತೊಂದು ಪುಂಜದಿಂದ ಪಲ್ಲಟಿಸಿ ಹೊಸ ಎಸ್ಟರನ್ನು ನಿರ್ಮಿಸಬಹುದು. ಈ ಬಗೆಯ ಕ್ರಿಯೆಯ ಹೆಸರು ಎಸ್ಟರ್ ವಿನಿಮಯ ಕ್ರಿಯೆ (ಎಸ್ಟರ್ ಇಂಟರ್ಚೇಂಜ್).
ಲ
ಗುಣಲಕ್ಷಣಗಳು : ಎಸ್ಟರುಗಳು ಬಲುಮಟ್ಟಿಗೆ ದ್ರವಗಳು. ಬಲು ಹಿರಿಯ ಅಣುತೂಕದ ಹಲವು ಎಸ್ಟರುಗಳು ಘನವಸ್ತುಗಳು. ಇವುಗಳ ಕರಗುವ ಬಿಂದು ಸಹ ಅಷ್ಟೇನೂ ಹೆಚ್ಚಿರುವುದಿಲ್ಲ. ಆಲ್ಕೊಹಾಲ್ ಮತ್ತು ಆಮ್ಲಗಳಲ್ಲಿರುವ ಹೈಡ್ರೊಜನ್ ಬಂಧ ಎಸ್ಟರುಗಳಲ್ಲಿ 

ಇಲ್ಲವಾದ್ದರಿಂದ ಸಮಾನ ಅಣುತೂಕದ ಆಮ್ಲ, ಆಲ್ಕೊಹಾಲುಗಳ ಕರಗುವ ಬಿಂದುಗಳಿಗಿಂತಲೂ ಎಸ್ಟರಿನ ಕರಗುವ ಬಿಂದು ಮತ್ತು ಕುದಿಯುವ ಬಿಂದುಗಳು ಕಡಿಮೆಯಿರುವುದು ಸಹಜವೇ ಆಗಿದೆ.
ಎಸ್ಟರುಗಳ ರಾಸಾಯನಿಕ ಲಕ್ಷಣಗಳನ್ನು ಪರಿಶೀಲಿಸುವಾಗ ಇವು ಆಮ್ಲ ಮತ್ತು ಆಲ್ಕೊಹಾಲುಗಳ ಉತ್ಪನ್ನಗಳು ಮತ್ತು ಕಾರ್ಬೊನಿಲ್ ಪುಂಜವುಳ್ಳ ಸಂಯುಕ್ತಗಳು ಎಂಬುದನ್ನು ನೆನಪಿನಲ್ಲಿಟ್ಟಿರಬೇಕು.
1. ಎಸ್ಟರುಗಳ ಜಲ ವಿಶ್ಲೇಷಣೆ ಆಮ್ಲ ಮತ್ತು ಆಲ್ಕೊಹಾಲುಗಳನ್ನು ಒದಗಿಸುತ್ತದೆ.

 ಇದು ಎಸ್ಟರ್ ತಯಾರಿಕೆಯ ವಿಪರ್ಯಯ ಕ್ರಿಯೆ. ವೇಗವರ್ಧಕಗಳ ನೆರವಿಲ್ಲದೆ ಕ್ರಿಯೆ ಬಲು ನಿಧಾನವಾಗಿ ನಡೆಯುತ್ತದೆ. ಆದರೆ ಆಮ್ಲ ಅಥವಾ ಕ್ಷಾರಗಳ ಸಂಪರ್ಕದಲ್ಲಿ ಸಾಕಷ್ಟು ವೇಗವಾಗಿ ನಡೆಯುತ್ತದೆ. ಕ್ಷಾರವನ್ನು ಬಳಸಿದಾಗ ಉತ್ಪತ್ತಿಯಾದ ಆಮ್ಲದೊಡನೆ ಅದು 

ವರ್ತಿಸಿ ಲವಣವನ್ನು ನೀಡುತ್ತದೆ. ಸಾಬೂನು ತಯಾರಿಸುವಾಗ ಈ ಕ್ರಿಯೆ ನಡೆಯುವುದರಿಂದ ಅದನ್ನು ಸಾಬೂನೀ ಕರಣ ಕ್ರಿಯೆ (ಸಪೋನಿಫಿಕೇಷನ್) ಎನ್ನುವರು. ಒಂದು ಅಣುತೂಕದಷ್ಟು ಕ್ಷಾರ ವಸ್ತುವಿನೊಡನೆ ಸಂಪುರ್ಣವಾಗಿ ವರ್ತಿಸಬಲ್ಲ ಎಸ್ಟರಿನ ತೂಕಕ್ಕೆ ಎಸ್ಟರಿನ 

ಸಾಬೂನೀಕರಣಾಂಕ ಎಂದು ಹೆಸರು.
2. ಕ್ಷಾರ ವಸ್ತು ಅಮೋನಿಯ ಆಗಿದ್ದಲ್ಲಿ ಕ್ರಿಯೆ ಅಮೋನಿಯ ವಿಶ್ಲೇಷಣೆ (ಅಮೊನೊ ಲಿಸಿಸ್) ಎನ್ನಿಸಿಕೊಳ್ಳುತ್ತದೆ. ಆಗ ವ್ಯುತ್ಪನ್ನ ಲವಣವಾಗಿರದೆ ಅಮೈಡ್ ಆಗಿರುತ್ತದೆ.

3 ನೀರಿನೊಡನೆ ವರ್ತಿಸುವಂತೆಯೇ ಎಸ್ಟರುಗಳು ಆಮ್ಲದ ಸಂಪರ್ಕದಲ್ಲಿ ಆಲ್ಕೊಹಾಲು ಗಳೊಡನೆ ವರ್ತಿಸಬಲ್ಲುವು. ಆಗ ಹೊಸ ಎಸ್ಟರ್ ಮತ್ತು ಆಲ್ಕೊಹಾಲುಗಳು ದೊರೆಯುತ್ತವೆ. ಈ ರಿಯೆ ಎಸ್ಟರ್ ವಿನಿಮಯ ಅಥವಾ ಆಲ್ಕೊಹಾಲ್ ವಿಶ್ಲೇಷಣೆ (ಆಲ್ಕೋಹಾಲಿಸಿಸ್) 

ಅಥವಾ ಸ್ಥಾನಾಂತರ ಎಸ್ಟರಿಫಿಕೇಷನ್ (ತ್ರಾನ್ಸ್‌ ಎಸ್ಟರಿಫಿಕೇಷನ್) ಎನ್ನಿಸಿಕೊಳ್ಳುತ್ತದೆ.

ಈ ಎಸ್ಟರುಗಳಿಗೆ ಹೈಡ್ರೊಜನನ್ನು ಸೇರಿಸಿದಾಗ ಅಥವಾ ಅವನ್ನು ಅಪಕರ್ಷಿಸಿದಾಗ ಆಲ್ಕೊಹಾಲುಗಳು ಉಂಟಾಗುತ್ತವೆ. ಈ ಬಗೆಯ ಅಪಕರ್ಷಣಕ್ಕೆ ಸೂಕ್ತ ವೇಗವರ್ಧಕಗಳ ಸಂಪರ್ಕದಲ್ಲಿ ಹೈಡ್ರೊಜನನ್ನಾಗಲೀ ಇತರ ಅಪಕರ್ಷಣಕಾರಿಗಳನ್ನಾಗಲೀ ಬಳಸಬಹುದು. 

ಜಲಜನಕೀಕರಣ ಮಾಡುವಾಗ ಪ್ಲ್ಯಾಟಿನಂ, ಪೆಲೇಡಿಯಂ ರುಥೇನಿಯಂ, ತಾಮ್ರ, ರ್ಹೋಡಿಯಂ ಮೊದಲಾದ ಅನೇಕ ವೇಗವರ್ಧಕಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಬಳಸುವ ಅಪಕರ್ಷಣಕಾರಿಗಳೆಂದರೆ ಸೋಡಿಯಂ ಆಲ್ಕೊಹಾಲ್ ಮಿಶ್ರಣ ಅಥವಾ ಲಿಥಿಯಂ 

ಅಲ್ಯೂಮಿನಿಯಂ ಹೈಡ್ರೈಟ್, ಸೋಡಿಯಂ ಬೊರೋ ಹೈಡ್ರೈಡ್ಗಳಂಥ ಲೋಹ ಹೈಡ್ರೈಡುಗಳು
5 ಎಸ್ಟರುಗಳು ಗ್ರಿನಾರ್ಡ್ ಸಂಯುಕ್ತಗಳೊಡನೆ ವರ್ತಿಸಿದಾಗ ದೊರೆಯುವ ಅಸ್ಥಿರ ಆಗಾರ್ಯ್‌ನೋ ಲೋಹ ಸಂಯುಕ್ತಗಳ ಜಲವಿಶ್ಲೇಷಣೆ ಟರ್ಷಿಯರಿ ಆಲ್ಕೊಹಾಲುಗಳನ್ನು ಒದಗಿಸುತ್ತದೆ. ಈ ಕ್ರಿಯೆಯಲ್ಲಿ ಕೀಟೋನುಗಳು ಮಧ್ಯವರ್ತಿಗಳೆಂದು ತಿಳಿದು ಬಂದಿದೆ.
6 3000 ಸೆಂ. ಗಿಂತಲೂ ಹೆಚ್ಚು ಉಷ್ಣತೆಗೆ ಆಲ್ಕೊಹಾಲುಗಳ ಎಸ್ಟರುಗಳನ್ನು ಒಳಪಡಿಸಿದಾಗ ಆಲ್ಕೇನುಗಳು ದೊರೆಯುತ್ತವೆ.
ಖ-ಅಔ-ಔ-ಅಊ2. ಅಊ2-ಖ’ಖ-ಅಔಔಊ + ಖ’ಅಊ=ಅಊ2
ಹಲವು ವಿಶಿಷ್ಟ ಎಸ್ಟರುಗಳು ಮತ್ತು ಪಾಲಿ ಎಸ್ಟರುಗಳು : ಕೆಲವು ಆಮ್ಲಗಳಲ್ಲಿ ಎರಡು ಕಾರ್ಬಾಕ್ಲಿಲ್ ಪುಂಜಗಳು (ರ್ಯಾಡಿಕಲ್) ಇರುವುದುಂಟು. ಅವುಗಳಲ್ಲಿ ಒಂದು ಮಾತ್ರ ಎಸ್ಟರಾಗಿ ಇನ್ನೂಂದು ಪುಂಜ ಮುಕ್ತಸ್ಥಿತಿಯಲ್ಲಿದ್ದರೆ ಅದು ಅರ್ಧ ಎಸ್ಟರ್ ಇವು ಎಸ್ಟರ ಮತ್ತು 

ಆಮ್ಲದ ಗುಣಗಳೆರಡನ್ನೂ ಪಡೆದಿರುತ್ತವೆ.
ಒಂದು ಸಂಯುಕ್ತದಲ್ಲಿ ಆಮ್ಲ, ಆಲ್ಕೊಹಾಲ್ ಪುಂಜಗಳೆರಡೂ ಇದ್ದು ಇವುಗಳ ಪರಸ್ಪರ ಸಂಯೋಗದಿಂದ ದೊರೆಯುವ ಎಸ್ಟರೇ, ಚಕ್ರೀಯ ಎಸ್ಟರ್ (ಸೈಕ್ಲಿಕ್ ಎಸ್ಟರ್) ಅಥವಾ ಲ್ಯಾಕ್ಟೋನ್. ಲ್ಯಾಕ್ಟೋನಿನ ಕಾರ್ಬೊನಿಲ್ ಪುಂಜ ಮತ್ತು ಆಕ್ಸಿಜನ್ನಿನ ನಡುವಿರುವ 

ಪರಮಾಣುಗಳ ಸಂಖ್ಯೆಯನ್ನು ಅನುಸರಿಸಿ ಅವನ್ನು ಲ್ಯಾಕ್ಟೋನುಗಳೆಂದು ಕರೆಯಲಾಗುತ್ತದೆ.
ಮೇಲೆ ತೋರಿಸಿರುವ b ಲ್ಯಾಕ್ಟೋನ್ ಹೈಡ್ರಾಕ್ಸಿ ಪ್ರೋಪಿಯೋನಿಕ್ ಆಮ್ಲದ ವ್ಯುತ್ಪನ್ನವಾದ್ದರಿಂದ ಪ್ರೋಪಿಯೋನಿಕ್ ಲ್ಯಾಕ್ಟೋನ್ ಎನ್ನಿಸಿಕೊಳ್ಳುತ್ತದೆ. ಈ ಸಂಯುಕ್ತ ಅಸ್ಥಿರ ಚೌಕ ಅಣುರಚನೆಯನ್ನು ಪಡೆದಿರುವ್ಯದರಿಂದ ಪಟುವಾಗಿದ್ದು ಆಮ್ಲಗಳ ಸಂಪರ್ಕ ಪಾಲಿ 

ಎಸ್ಟರ್ಲಿಮರ್ ಆಗಿ ಪರಿವರ್ತಿತವಾಗುತ್ತದೆ.
   
                         ಪಾಲಿಎಸ್ಟರ್
g-ಮತ್ತು ಲ್ಯಾಕ್ಟೋನುಗಳು ಈ ಬಗೆಯಾಗಿ ಪಾಲಿ ಎಸ್ಟರುಗಳಾಗದಿರಲು ಇವು ತಕ್ಕ ಮಟ್ಟಿಗೆ ಸ್ಥಿರ ಸಂಯುಕ್ತಗಳಾಗಿರುವಿದೆ ಕಾರಣ. ವೃತ್ತದಲ್ಲಿ ಐದು ಅಥವಾ ಆರು ಪರಮಾಣುಗಳನ್ನುಳ್ಳ ಲ್ಯಾಕ್ಟೋನುಗಳಲ್ಲಿ ಬಂಧಾಂತರ ಕೋನ ವಿಕಾರ (ಆಮಗ್ಯುಲರ್ ಸ್ಟ್ರೈನ್) ಬಲು 

ಕಡಿಮೆ. e ಅಥವಾ ಅದಕ್ಕೂ ಮುಂದಿನ ಹೈಡ್ರಾಕ್ಸಿ ಆಮ್ಲಗಳು ಲ್ಯಾಕ್ಟೋನುಗಳಾಗಿ ಪರಿವರ್ತಿತವಾಗದೆ, ನೇರವಾಗಿ ಪಾಲಿ ಎಸ್ಟರುಗಳಾಗುತ್ತವೆ.
                                     ಉಷ್ಣ	
               ಊಔ ಅಊ2ಅಊ2ಅಊ2ಅಊ2ಅಊ2-ಅಔಔಊ

ಇನ್ನೂಂದು ಬಗೆಯ ಪಾಲಿ ಎಸ್ಟರುಗಳನ್ನು ಪಾಲಿ ಆಮ್ಲ ಮತ್ತು ಪಾಲಿ ಆಲ್ಕೊಹಾಲುಗಳ ಸಂಯೋಜನೆಯಿಂದ ತಯಾರಿಸಬಹುದು. ಇವುಗಳಲ್ಲಿ ಮುಖ್ಯವಾದುವು ಗ್ಲಿಸರಾಲ್ ಮತ್ತು ಆರ್ಥೋಫ್ರ್ಯಾಲಿಕ್ ಆಮ್ಲಗಳಿಂದ ದೊರೆಯುವ ಗ್ಲಿಪ್ಟಾಲ್ ಹಾಗೂ ಎಥಿಲಿನ್ ಗ್ಲೈಕಾಲ್ ಮತ್ತು 

ಟೆರೆಫ್ತ್ಯಾಲಿಕ್ ಆಮ್ಲಗಳ ಸಂಯೋಜನೆಯಿಂದ ದೊರೆಯುವ ಟೆರೀನ್ ಟೆರಿಲೀನ್ ಅಥವಾ ಡೆಕ್ರಾನ್ ಎಂದೆನ್ನಿಸಿಕೊಳ್ಳುವ ಕೃತಕ ಎಳೆ.
ಉಪಯೋಗಗಳು: ಹೂ ಹಣ್ಣುಗಳಲ್ಲಿ ದೊರೆಯುವ ಕಡಿಮೆ ಅಣು ತೂಕದ ಅನೇಕ ಸಹಜ ಎಸ್ಟರುಗಳನ್ನೂ ಕೃತಕವಾಗಿ ತಯಾರಿಸಿದ ಅವುಗಳ ಸಂಬಂಧಿಗಳನ್ನೂ ಸುಗಂಧ ಮಧುರ ದ್ರವ್ಯ ಉದ್ದಿಮೆಗಳಲ್ಲಿ ಉಪಯೋಗಿಸಲಾಗುತ್ತಿದೆ. ಎಣ್ಣೆ ಕೊಬ್ಬುಗಳನ್ನು ಆಹಾರವಾಗಿಯೂ 

ಸಾಬೂನು ತಯಾರಿಕೆಯಲ್ಲೂ ಉಪಯೋಗಿಸುತ್ತಿದ್ದೇವೆ. ಕೃತಕ ಮಾರ್ಜಕಗಳಿಗೆ ಬೇಕಾಗುವ ಹಿರಿಯ ತೂಕದ ಆಲ್ಕೊಹಾಲುಗಳ ತಯಾರಿಕೆಗೂ ಎಣ್ಣೆ ಕೊಬ್ಬುಗಳೇ ಮೂಲವಸ್ತುಗಳು. ಎಸ್ಟರ್ ವ್ಯುತ್ಪನ್ನಗಳಾದ ಕೃತಕ ಮಾರ್ಜಕಗಳ ಉಪಯುಕ್ತತೆ ದಿನೇದಿನೇ ಹೆಚ್ಚುತ್ತಿದೆ. 

ಕೃತಕ ಎಳೆಯಾದ ಟೆರೀನ್ ಪಾಲಿ ಎಸ್ಟರ್ ಇಂದು ಸರ್ವಜನಪ್ರಿಯವಾಗಿ ವಸ್ತ್ರ ಉದ್ದಿಮೆಯಲ್ಲಿ ಪ್ರಮುಖಪಾತ್ರ ವಹಿಸುತ್ತಿದೆ. ಗ್ಲಿಪ್ಟಾಲ್ ಮತ್ತು ಅದರಂಥ ಇನ್ನೂ ಹಲವು ಪಾಲಿ ಎಸ್ಟರ್ ಪ್ಲಾಸ್ಟಿಕುಗಳ ಉಪಯೋಗ ಹಲವಾರು.
ಅನೇಕ ಸ್ಯಾಲಿಸಿಲೇಟ್, ಬೆಂಜೋ಼ಯೇಟುಗಳು ಮತ್ತು ಅವುಗಳ ವ್ಯುತ್ಪನ್ನಗಳಿಗೆ ಔಷಧರಂಗದಲ್ಲೇ ವಿವಿಧ ರೀತಿಯ ಉಪಯೋಗಗಳಿವೆ. ಮೀಥೈಲ್ ಫಾರ್ಮೇಟ್ ಒಂದು ಕ್ರಿಮಿನಾಶಕ. ಈಥೈಲ್ ಅಸಿಟೇಟ್, ಪ್ರೋಪೈಲ್ ಅಸಿಟೇಟ್ ಮತ್ತು ಬ್ಯೂಟೈಲ್ ಅಸಿಟೇಟುಗಳು 

ಸಾರ್ವತ್ರಿಕ ಲೀನಕಾರಿಗಳಾಗಿ (ಸಾಲ್ವೆಂಟ್ಸ್‌) ಉಪಯೋಗಕ್ಕೆ ಬರುತ್ತವೆ. ಈಥೈಲ್ ಅಸಿಟೇಟ್ ಬಹುಶಃ ಎಸ್ಟರುಗಳಲ್ಲೆಲ್ಲ ಅತ್ಯಂತ ಪರಿಚಿತವಾದದ್ದು ಮತ್ತು ಅದರ ಉಪಯೋಗ ಮಧುರ ದ್ರವ್ಯಗಳಲ್ಲಿ, ಸುಗಂಧ ದ್ರವ್ಯದ ಉದ್ದಿಮೆಯಲ್ಲಿ, ಕರ್ಪುರ, ಮರಗಳ ಎಣ್ಣೆ ಅಂಟುಗಳು 

ಹಲವು ಬಗೆಯ ಪ್ಲಾಸ್ಟಿಕ್ಕುಗಳೇ ಮೊದಲಾದ ಅನೇಕ ವಸ್ತುಗಳ ಲೀನಕಾರೀ ಸಂಸ್ಕರಣಗಳಲ್ಲಿ ಇದೆ. ಕೃತಕ ಚರ್ಮ, ಸೆಲ್ಯುಲಾಯ್ಡ್‌ ಸಾಮಗ್ರಿಗಳು, ಮಸಿ, ಪಾಲಿಶುಗಳೇ ಮೊದಲಾದುವುಗಳ ತಯಾರಿಕೆಗಳಲ್ಲಿ ಲೀನಕಾರಿಯಾಗಿಯೂ ಈಥೈಲ್ ಅಸಿಟೇಟನ್ನು 

ಉಪಯೋಗಿಸಲಾಗುತ್ತದೆ.
ಈಥೈಲ್ ಅಸಿಟೋ ಅಸಿಟೇಟ್ ಎಂಬ ಎಸ್ಟರ್ ಅನೇಕ ಸಾವಯವ ಸಂಶ್ಲೇಷಣೆಗಳಲ್ಲಿ ಉಪಯುಕ್ತವಾಗಿದೆ. ಅನೇಕ ವರ್ಣದ್ರವ್ಯಗಳು, ಆಂಟಿ ಪೈರೀನ್, ಅಮೈನೋ ಪೈರೀನ್, ಅಟಾಟ್ರಿನ್, ಥಯಮಿನ್ ಮತ್ತು ಪೈರಜೊóಲೋನ್ ಗುಂಪಿಗೆ ಸೇರಿದ ಅನೇಕ ಔಷಧ ದ್ರವ್ಯಗಳ 

ತಯಾರಿಕೆಯಲ್ಲಿ ಈ ಎಸ್ಟರನ್ನು ಉಪಯೋಗಿಸಲಾಗುತ್ತದೆ.     (ಕೆ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ